ಮೂಡಿಗೆರೆ :ಭಾರತಿಬೈಲ್‍ನಲ್ಲಿ ಹುಲಿ ಹೆಜ್ಜೆ ಪತ್ತೆ

143

ಕೊಟ್ಟಿಗೆಹಾರ:ಭಾರತಿಬೈಲ್‍ನ ತೋಟವೊಂದರಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಭಾರತಿಬೈಲ್‍ನ ತೋಟವೊಂದರಲ್ಲಿ ಹುಲಿ ಹೆಜ್ಜೆ ಹಾಗೂ ಹಿಕ್ಕೆ ಪತ್ತೆಯಾಗಿ ಅರಣ್ಯ ಅಧಿಕಾರಿಗಳು ಆಗಮಿಸಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಆದರೆ ಅದರ ನಂತರ ಹುಲಿ ಆ ಪ್ರದೇಶದಲ್ಲಿ ಬಾರದೇ ಇರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಕೆಲ ದಿನಗಳಿಂದ ಗ್ರಾಮದ ತೋಟದಲ್ಲಿ ಹುಲಿ ಹೆಜ್ಜೆಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಭಾರತಿಬೈಲ್ ಗ್ರಾಮಸ್ಥ ರಫೀಕ್, ನಮ್‍ಮ ತೋಟದಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು ತೋಟಕ್ಕ ಹೋಗಲು ಭಯವಾಗುತ್ತದೆ. ತೋಟ ಕಾರ್ಮಿಕರು ಕೂಡ ತೋಟಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಇದರ ಜೊತೆಗೆ ವಿಪರೀತ ಮಂಗಗಳ ಕಾಟ ಹೆಚ್ಚಿದ್ದು ಕಾಫಿ ಕಾಯಿಗಳನ್ನು ಕಿತ್ತು ಕಾಫಿ ಗಿಡಗಳನ್ನು ತುಂಡು ಮಾಡಿ ಹಾಕುತ್ತಿದ್ದೆ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿದ್ದು ಗ್ರಾಮಸ್ಥರಿಗೆ ಪಟಾಕಿಗಳನ್ನು ನೀಡಿ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಸುವುದಾಗಿ ತಿಳಿಸಿದ್ದಾರೆ.