ಕೊರೊನಾಗೆ ‘ಬೆಟ್ಟದ ಹೂವು’ ಖ್ಯಾತಿಯ ನಟ ಶಂಖನಾದ ಅರವಿಂದ್ ಬಲಿ…

283
firstsuddi

ಬೆಂಗಳೂರು : ಕೊರೊನಾ ಮಹಾಮಾರಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು, ಕಲಾವಿದರು, ನಿರ್ದೇಶಕರನ್ನು ಬಲಿ ಪಡೆಯುತ್ತಿದ್ದು, ಇದೀಗ ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ಅವರು ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಶಂಖನಾದ ಅರವಿಂದ್ ಅವರು ಕಳೆದ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಶಂಖನಾದ ಅರವಿಂದ್ ಅವರು ಸಾವನ್ನಪ್ಪಿದ್ದಾರೆ.

ಜನವರಿ 23ರಂದು ಅರವಿಂದ್ ಪತ್ನಿ ರಮಾ ಕೂಡ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದ್ದರು. ದಿವಗಂತ ಕಾಶಿನಾಥ್ ಆಪ್ತರಾಗಿದ್ದ ಶಂಖನಾದ ಅರವಿಂದ್ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅರವಿಂದ್ ಅವರು ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಪುತ್ರನನ್ನ ಅಗಲಿದ್ದಾರೆ.