ಕೊರೊನಾಗೆ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಅವರು ಬಲಿ…

151
firstsuddi

ಮುಂಬೈ: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಅವರು ಕೋವಿಡ್ ಗೆ ಬಲಿಯಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಮೂರು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶ್ರವಣ್ ರಾಥೋಡ್ ಅವರು ಎಸ್.ಎಲ್.ರಹೇಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

90ರ ದಶಕದಲ್ಲಿ ನದೀಮ್- ಶ್ರವಣ್ ಪ್ರಖ್ಯಾತ ಸಂಗೀತ ಸಂಯೋಜಕರು. ಆಶಿಕಿ, ಸಾಜನ್, ದಿಲ್ ಹೈ ಕೀ ಮಾನತಾ ನಹೀಂ, ಸಡಕ್, ಪರದೇಶ್ ಸೇರಿದಂತೆ ಹಲವು ಚಿತ್ರಗಳಿಗೆ ನದೀಮ್ – ಶ್ರವಣ್ ಅವರ ಸಂಗೀತವಿದೆ.