ಕೊರೊನಾ ವೈರಸ್ ತಡೆಗೆ ದೇವಿಯ ಮೊರೆ ಹೋದ ಯುವಕರು…

212
firstsuddi

ಯಾದಗಿರಿ : ಚೀನಾದಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಕೊರೊನಾ ವೈರಸ್ ವಿಶ್ವದಾತ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ವೈರಸ್ ತಡೆಗೆ ಯಾದಗಿರಿಯ ಯುವಕರು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಕೊರೊನಾ ವೈರಸ್ ಈಗಾಗಲೇ ಸಾವಿರ ಮಂದಿಯನ್ನು ಬಲಿ ಪಡೆದಿದ್ದು, ಕರ್ನಾಟಕದಲ್ಲೂ ಈ ಮಾರಣಾಂತಿಕ ವೈರಸ್ ಹರಡಿ ಜನಸಾಮಾನ್ಯರಲ್ಲಿ ಭಯ ಉಂಟುಮಾಡಿದೆ. ಹೀಗಾಗಿ ದೈವ ಶಕ್ತಿಯಿಂದ ವೈರಸ್ ನಾಶವಾಗುತ್ತದೆ ಎಂಬ ನಂಬಿಕೆಯಿಂದ ಯುವಕರು ನಗರದ ಸ್ಟೇಷನ್ ರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.