ಕೊರೋನಾ ಭೀತಿ : ಗೃಹಬಂಧನದಲ್ಲಿ ಇರಬೇಕಾದ ವ್ಯಕ್ತಿಗಳು ಸಾರ್ವಜನಿಕವಾಗಿ ತಿರುಗಾಡಿದರೆ ಪ್ರಕರಣ ದಾಖಲು : ಭಾಸ್ಕರ್ ರಾವ್

211
firstsuddi

ಬೆಂಗಳೂರು : ವಿದೇಶದಿಂದ ಆಗಮಿಸಿ ಗೃಹ ಬಂಧನದಲ್ಲಿ ಇರಬೇಕಾದ ವ್ಯಕ್ತಿಗಳು ಸಾರ್ವಜನಿಕವಾಗಿ ತಿರುಗಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈಗಾಗಲೇ 5000 ಮಂದಿ ಗೃಹ ಬಂಧನದಲ್ಲಿ ಇದ್ದಾರೆ. ವಿದೇಶದಿಂದ ಬಂದು ಗೃಹ ಬಂಧನದಲ್ಲಿ ಇರುವ ಕೆಲವು ವ್ಯಕ್ತಿಗಳು ಬಿಎಂಟಿಸಿ ಬಸ್‍ಗಳಲ್ಲಿ ಚಲಿಸುತ್ತಿದ್ದಾರೆ ಎಂಬ ಕರೆಗಳು ಬಂದಿವೆ ಹಾಗೂ ರೆಸ್ಟೋರೆಂಟ್‍ಗಳಲ್ಲಿ ಕುಳಿತಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರುವ ವ್ಯಕ್ತಿಗಳು ಹೊರಗೆ ಎಲ್ಲಾದರು ಸುತ್ತಾಡುವುದು ಕಂಡುಬಂದರೆ ದಯವಿಟ್ಟು ಕೂಡಲೇ 100ಕ್ಕೆ ಕರೆ ಮಾಡಿ ತಿಳಿಸಿ. ಬಳಿಕ ಅವರನ್ನು ನಮ್ಮ ಸಿಬ್ಬಂಧಿಗಳು ಬಂಧಿಸಿ ಸರ್ಕಾರಿ ಬಂಧನದಲ್ಲಿ ಇಡುತ್ತಾರೆ ಎಂದು ತಿಳಿಸಿದ್ದಾರೆ.