ಕ್ಯಾನ್ಸರ್​ನಿಂದ ಸಂಪೂರ್ಣ ಗುಣಮುಖರಾದ ಅಮೆರಿಕ ಅಧ್ಯಕ್ಷ ಜೋ ಬೈಡನ್.

33
firstsuddi

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇದೀಗ ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜೋ ಬೈಡನ್ ಗೆ ಇದ್ದ ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ. ಅವರು ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ ಕಾನರ್ ತಿಳಿಸಿದ್ದಾರೆ.

80 ವರ್ಷ ವಯಸ್ಸಿನ ಅಮೆರಿಕ ಅಧ್ಯಕ್ಷರಿಗೆ ಎದೆಯಲ್ಲಿ ಚರ್ಮದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ. ಬೈಡನ್ ಗೆ ಇದ್ದಿದ್ದ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಅವರ ಆರೋಗ್ಯದ ರಕ್ಷಣೆಯ ಭಾಗವಾಗಿ ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜೋ ಬೈಡನ್ ಅವರು 2024ರಲ್ಲಿ 2ನೇ ಬಾರಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೂ ಅವರ ಪತ್ನಿ ಜಿಲ್ ಬೈಡನ್ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗೆಗಿನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.