ಬೆಂಗಳೂರು : ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಗಣೇಶ ವಿಸರ್ಜನೆ ವೇಳೆ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಭರ್ಜರಿ ಸ್ಟೆಪ್ ಹಾಕುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಕಾಲೋನಿಯಲ್ಲಿ ನಡೆದ ಗಣಪತಿ ಉತ್ಸವಕ್ಕೆ ಅಭಿಮಾನಿಗಳು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ಎಂಟಿಬಿ ನಾಗರಾಜ್ ಅವರು ಗಣೇಶ ಮೂರ್ತಿ ಎದುರು ಅಭಿಮಾನಿಗಳೊಂದಿಗೆ ಖುಷಿಯಿಂದ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ಹಿಂದೆ ಕೂಡಾ ನಾಗರಾಜ್ ಅವರು ಸಾರ್ವಜನಿಕವಾಗಿ ನಾಗಿಣಿ ಡ್ಯಾನ್ಸ್ ಹಾಗೂ ಕತ್ತಿ ವರಸೆ ಮಾಡುವ ಮೂಲಕ ಸುದ್ದಿಯಾಗಿದ್ದರು.










