ಗರ್ಭಿಣಿಯೆಂದು ಗೊತ್ತಾದಾಗ ಮನೆಯವರಿಗೆ ಹೊಟ್ಟೆಯಲ್ಲಿರುವ ಮಗು ಹೆಣ್ಣೊ-ಗಂಡೊ ಅಂತ ತಿಳಿಯುವ ತವಕ. ಮಗು ಹುಟ್ಟುವವರೆಗೆ ಕಾಯುವ ಬದಲು ಹೊಟ್ಟೆಯಲ್ಲಿರುವಾಗಲೆ ಹೊಟ್ಟೆಯನ್ನು ನೋಡಿ ಹೆಣ್ಣು ಅಥವಾ ಗಂಡು ಅಂತ ಹೇಳುವುದು ಜಾಸ್ತಿ. ಇಂತಹ ಊಹೆಗಳಲ್ಲಿ ಕೆಲವೊಂದು ನಿಜವಾಗುವುದು. ಆ ಊಹೆಗಳ ಬಗ್ಗೆ ತಿಳಿಯಲು ಮುಂದೆ ಓದಿ.
1. ಹೊಟ್ಟೆ: ಗರ್ಭಿಣಿಯರ ಹೊಟ್ಟೆ ನೋಡಿ ಮಗು ಹೆಣ್ಣೊ ಅಥವಾ ಗಂಡೊ ಎಂದು ಹಿರಿಯರು ಹೇಳಿದ್ದನ್ನು ಕೇಳಬಹುದು. ಕೆಳ ಹೊಟ್ಟೆ ಹೆಚ್ಚು ಉಬ್ಬು ಕೊಂಡಿದ್ದರೆ ಗಂಡು ಮಗುವೆಂದು, ತುಂಬಾ ಹೊಟ್ಟೆಯಿದೆ ಎಂದಾದರೆ ಹೆಣ್ಣು ಮಗುವೆಂದು ಊಹಿಸಿತ್ತಾರೆ. ಆದರೆ ಈ ಊಹೆ ತಪ್ಪಾಗುವ ಸಾದ್ಯತೆ ಕೂಡ ಇರುತ್ತದೆ.
2.ತಿನ್ನುವ ಬಯಕೆ: ಗರ್ಭಿಣಿಯರಿಗೆ ತಿನ್ನುವ ಬಯಕೆ ಹೆಚ್ಚು. ಖಾರ ಮತ್ತು ಸಿಹಿ ತಿನ್ನುವ ಬಯಕೆ ಇದ್ದರೆ ಹೆಣ್ಣು ಮಕ್ಕಳಾಗುತ್ತದೆ. ಗಂಡು ಮಗುವಾದರೆ ಹುಳಿ ತಿನ್ನಬೇಕು ಅನಿಸುತ್ತದೆ, ಸಿಹಿ ಅಷ್ಟಾಗಿ ತಿನ್ನುವುದಿಲ್ಲ. ಆದರೆ ಕೆಲವರಿಗೆ ಸಿಹಿ, ಹುಳಿ ಅಂತ ಪ್ರತ್ಯೇಕವಾದ ಬಯಕೆ ಇರುವುದಿಲ್ಲ. ಆದ್ದರಿಂದ ಈ ಊಹೆಗಳು ಸರಿಯೆಂದು ಹೇಳಲು ಬರುವುದಿಲ್ಲ.
3. ಸ್ತನದ ಗಾತ್ರ: ಬಲಬದಿಯ ಸ್ತನದ ಗಾತ್ರ ದೊಡ್ಡದಾಗಿದ್ದರೆ ಗಂಡು ಮಗುವೆಂದು ಹೇಳುತ್ತಾರೆ. ಅದರೆ ಅನೇಕ ಮಹಿಳೆಯರ ಬಲ ಮತ್ತು ಎಡ ಬದಿಯ ಸ್ತನಗಳು ಒಂದೇ ಗಾತ್ರದಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ಈ ಊಹೆ ಕೂಡ ಎಷ್ಟರ ಮಟ್ಟಿಗೆ ಸರಿಯೆಂದು ಹೇಳಲು ಸಾಧ್ಯವಿಲ್ಲ.
4. ಮಕ್ಕಳ ಹತ್ತಿರ ಕೇಳುವುದು: ಈ ಊಹೆ ವಿನೋದವಾಗಿದ್ದರು ಕೆಲವೊಮ್ಮೆ ಸತ್ಯವಾಗುತ್ತದೆ. ಅದೇನಪ್ಪ ಅಂದರೆ ಹಣ್ಣು ಮತ್ತು ಹೂ ತಟ್ಟೆಯಲ್ಲಿ ಇಟ್ಟು, ಮಕ್ಕಳ ಹತ್ತಿರ ಅದರಲ್ಲಿ ಒಂದು ತೆಗೆಯಲು ಹೇಳುವುದು. ಆ ಮಗು ಹೂ ತೆಗೆದರೆ ಹೆಣ್ಣು ಅಂದೂ, ಹಣ್ಣು ತೆಗೆದರೆ ಗಂಡು ಎಂದು ಹೇಳಲಾಗುವುದು. ಇನ್ನು ಕೆಲವರು ಮಕ್ಕಳ ಹತ್ತಿರ ಹೊಟ್ಟೆ ಮುಟ್ಟಿ ನೋಡಿ ಹೇಳಲು ಹೇಳುತ್ತಾರೆ.
5. ಪಾದ: ತಣ್ಣನೆಯ ಪಾದಗಳನ್ನು ಹೊಂದಿರುವ ಮಹಿಳೆಯರಿಗೆ ಗಂಡು ಮಗುವಾಗುತ್ತದೆ ಎಂಬ ಊಹೆ ಕೂಡ ಇದೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಈ ಮೇಲಿನಂತೆ ಹೇಳುವುದನ್ನು ಕೇಳಬಹುದು. ಆದರೆ ಈ ಎಲ್ಲಾ ಊಹೆಗಳ ಎಲ್ಲಾ ಬಾರಿ ನಿಜವಾಗುವುದಿಲ್ಲ, ಎಲ್ಲಾ ಬಾರಿ ಸುಳ್ಳಾಗುವುದಿಲ್ಲ.










