ಗುಂಡು ಹಾರಿಸಿಕೊಂಡು ಉತ್ತರಾಖಂಡ ಮಾಜಿ ಸಚಿವ ರಾಜೇಂದ್ರ ಬಹುಗುಣ ಆತ್ಮಹತ್ಯೆ…

55
firstsuddi

ಜಾರ್ಖಂಡ್ : ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಅವರು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸೊಸೆ ಪ್ರಕರಣ ದಾಖಲಿಸಿದ್ದರಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿದ್ದ ಬಹುಗುಣ, ನನ್ನ ಸೊಸೆಯ ಆರೋಪ ನನಗೆ ಬೇಸರ ತಂದಿದೆ. ಹಾಗಾಗಿ ತಾವು ಆತ್ಮಹತ್ಯೆಗೆ ಯೋಚಿಸಿರುವುದಾಗಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಪೊಲೀಸರು ಅವರ ಮನೆಯತ್ತ ಧಾವಿಸಿದ್ದರು. ಪೊಲೀಸರು ಬಂದ ಬಳಿಕ, ಅಕ್ಕಪಕ್ಕದ ಮನೆಯವರು ಹಾಗೂ ಇತರರ ಕಣ್ಣೆದುರೇ ಅವರು ಗುಂಡು ಹಾರಿಸಿಕೊಂಡಿದ್ದಾರೆ.

ರಾಜೇಂದ್ರ ಬಹುಗುಣ ಅವರ ಸೊಸೆ ನೀಡಿದ ದೂರಿನ ಆಧಾರದ ಮೇರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ನೆರೆಹೊರೆಯವರು ಅವರ ಮೇಲೆ ಹಲ್ಲೆ ಆರೋಪ ಹೊರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಹುಗುಣ ಅವರಿಗೆ ರಾಜ್ಯದ ಮೊದಲ ಚುನಾಯಿತ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನಮಾನವನ್ನು ನೀಡಲಾಗಿತ್ತು. ಕಾಂಗ್ರೆಸ್ ನಾಯಕರಾಗಿದ್ದ ಬಹುಗುಣ ಅವರು 2004-05ರಲ್ಲಿ ಎನ್ ಡಿ ತಿವಾರಿ ಸರ್ಕಾರದಲ್ಲಿ ಸಚಿವರಾಗಿದ್ದರು. ರೋಡ್ ವೇಸ್ ಒಕ್ಕೂಟದ ನಾಯಕರಾಗಿದ್ದ ಅವರು ಹಲ್ದ್ವಾನಿ ಡಿಪೋ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಕ್ಟೋಬರ್ 31 ರಂದು ನಿವೃತ್ತರಾದರು.