ಗುಜರಾತ್‍ನಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ – ಸತತ 7ನೇ ಬಾರಿ ಅಧಿಕಾರಕ್ಕೆ ಏರುತ್ತಾ ಬಿಜೆಪಿ?

62
firstsuddi

ಗಾಂಧಿನಗರ : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸತತ ಏಳನೇ ಬಾರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ನೋಡುತ್ತಿದೆ.

ಚುನಾವಣೋತ್ತರ ಸಮೀಕ್ಷೆ ಭವಿಷ್ಯದಂತೆ ಬೆಳಗ್ಗೆ 10:30 ಗಂಟೆಯ ಟ್ರೆಂಡ್ ಪ್ರಕಾರ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 18, ಆಪ್ 06, ಇತರರು 02 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಅಹಮದಾಬಾದ್, ಗಾಂಧಿನಗರ ಸೇರಿದಂತೆ ರಾಜ್ಯ ಬಿಜೆಪಿ ಕಚೇರಿಗಳಲ್ಲಿ, ದೆಹಲಿಯ ಬಿಜೆಪಿಯ ಕಚೇರಿಯಲ್ಲಿ ಸಂಭ್ರಮಾಚರಣೆ ಮುಂದುವರಿದಿದೆ.

ಈ ಬಾರಿ 127ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದರೆ ಅದು ಬಿಜೆಪಿ ಪಕ್ಷದ ಮಟ್ಟಿಗೆ ದಾಖಲೆಯಾಗಲಿದೆ. 1985ರಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು.