ಬೆಂಗಳೂರು: ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ ಎಂದು ಕೇಂದ್ರ ಸಚಿವ ಹೆಚ್‍ಡಿಕೆ ಕರೆ ನೀಡಿದರು. ಕಿಯೋನಿಕ್ಸ್ ವೆಂಡಸ್ರ್ಗಳಿಂದ ದಯಾ ಮರಣಕ್ಕೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ನಾನು 60% ಕಮಿಷನ್ ಆರೋಪ ಮಾಡಿದಾಗ ಸರ್ಕಾರ ಮತ್ತು ಮುಖ್ಯಮಂತ್ರಿ ದಾಖಲೆ ಕೊಡಿ ಅಂತ ಹೇಳಿದ್ರು. ಹಂಗಾಮಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಏನು ಹೇಳಿದ್ದಾರೆ. ಪಸೆರ್ಂಟೇಜ್ ಎಷ್ಟು ಇದೆ ಅಂತ ಅವರೇ ಹೇಳಿದ್ದಾರೆ. ಇದಕ್ಕಿಂತ ದಾಖಲಾತಿ ಸಾಕ್ಷಿ ಬೇಕಾ ಮುಖ್ಯಮಂತ್ರಿಗೆ ಎಂದು ತಿರುಗೇಟು ನೀಡಿದರು. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡಗೆ ಹೇಳ್ತೀನಿ. ತಪ್ಪು ಮಾಡಿದವರ ಮೇಲೆ ಆಕ್ಷನ್ ತಗೊಳ್ಳಿ. ಪ್ರಾಮಾಣಿಕವಾಗಿ ಕೆಲಸ ಮಾಡದೆ ಬಿಲ್ ಮಾಡಿ ಹಣ ಹೊಡೆದಿರೋರು ಇದ್ದಾರೆ. ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಕೆಲಸವೇ ಮಾಡದೇ ಹಣ ಮಾಡಿರೋದು ಇದೆ. ನೀವು ಕೆಲಸ ಮಾಡಿದ್ದೀರಾ. ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ ಎಂದು ಪ್ರಶ್ನಿಸಿದರು. 18 ತಿಂಗಳಲ್ಲಿ ಮಾಡಿದ ಕೆಲಸಕ್ಕೆ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು, ತಪ್ಪು ಮಾಡಿದವನಿಗೆ ಏನು ಬೇಕೋ ಕ್ರಮ ಮಾಡಿ. ಜನಪ್ರತಿನಿಧಿಗಳ ಅಕ್ರಮ ಮಾಡಿದ್ರೆ ಅವರ ಮೇಲೆ ಆಕ್ಷನ್ ತಗೊಳ್ಳಿ. ವಿಚಾರಣೆ ನಡೆ ವಾಸ್ತವಾಂಶ ಹೊರಗೆ ತೆಗೆಯೋಕೆ ಎಷ್ಟು ತಿಂಗಳು ಬೇಕು, ವರ್ಷಗಳೇ ಬೇಕಾ, ಕಿಯೋನಿಕ್ಸ್ ವೆಂಡಸ್ರ್ಗಳಿಗೆ ಹಣ ಬಿಡುಗಡೆಗೆ ಆಗ್ರಹಿಸಿದರು.