ಗೆಳತಿಯ ಬಾಯ್ ಫ್ರೆಂಡ್ ನಿಂದಲೇ ಅತ್ಯಾಚಾರ – ಆರೋಪಿ ಪೊಲೀಸ್ ವಶಕ್ಕೆ…

83
firstsuddi

ಗದಗ : ಗೆಳತಿಯ ಬಾಯ್ ಫ್ರೆಂಡ್ ನಿಂದಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗದಗ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತೆ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ರಫಿಕ್ ಚಿಂಚಲಿಯನ್ನು ಗದಗ ಮಹಿಳಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸಂತ್ರಸ್ತೆ ಹಾಗೂ ಅವಳ ಸ್ನೇಹಿತೆ ಇಬ್ಬರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆಯ ಗೆಳತಿ ಬಾಯ್ ಫ್ರೆಂಡ್ ರಫೀಕ್ ಆಗಾಗ ಮನೆಗೆ ಬರುತ್ತಿದ್ದ. ಘಟನೆ ನಡೆಯುವ ಮುನ್ನ ಸಹ ಸ್ನೇಹಿತೆಯನ್ನು ಕೇಳಿಕೊಂಡು ಮನೆಗೆ ಬಂದಿದ್ದಾನೆ. ಆಗ ಮನೆಯಲ್ಲಿ ಸಂತ್ರಸ್ತೆ ಮಾತ್ರ ಇದ್ದು, ನಿಮ್ಮ ಗೆಳತಿ ಇನ್ನೂ ಮನೆಗೆ ಬಂದಿಲ್ಲ ಅಂತಾ ಹೇಳಿದ್ದಾಳೆ. ಆದರೆ, ಏಕಾಏಕಿ ಮನೆಯೊಳಗೆ ನುಗ್ಗಿದ ಆರೋಪಿಯು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೇ ಈ ಬಗ್ಗೆ ಯಾರಿಗಾದರೂ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ.

ಸದ್ಯ ಸಂತ್ರಸ್ತೆ ಗದಗ ಜಿಮ್ಸ್ ನ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಫಿಕ್ ನನ್ನು ಬಂಧಿಸಿರುವ ಗದಗ ಮಹಿಳಾ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.