ಗ್ಯಾಂಗ್‍ಸ್ಟರ್ ಲುಕ್‍ನಲ್ಲಿ ಯಶ್ ಸ್ಟೈಲಿಶ್ ಎಂಟ್ರಿ.

40

ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಇಂದು 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂಡಿಯನ್ ಕೆಜಿಎಫ್ ಸ್ಟಾರ್‍ಗೆ ಕುಟುಂಬಸ್ಥರು, ಸಿನಿಸ್ನೇಹಿತರು, ಆಪ್ತರೂ ಸೇರಿದಂತೆ ಅವರ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಯಶ್ ಮುಖ್ಯಭೂಮಿಕೆಯ ಮುಂದಿನ ಚಿತ್ರ ಟಾಕ್ಸಿಕ್ ಕಡೆಯಿಂದ ಸಿನಿಪ್ರಿಯರಿಗೆ ಹುಟ್ಟುಹಬ್ಬದ ಟ್ರೀಟ್ ಸಿಕ್ಕಿದೆ. ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ನ ತಂಡ ಆಕರ್ಷಕ ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ನಟನಿಗೆ ವಿಶೇಷವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ಕುತೂಹಲಕಾರಿ ಪ್ರಾಜೆಕ್ಟ್‍ನ ಅಪ್ಡೇಟ್‍ಗಾಗಿ ಅಭಿಮಾನಿಗಳು ಬಹಳ ಕಾತುರರಾಗಿದ್ದರು. ಅದರಂತೆ ಪೋಸ್ಟರ್ ಮೂಲಕ ಅಭಿಮಾನಿಗಳ ಕುತೂಹಲವನ್ನು ಚಿತ್ರತಂಡ ಹೆಚ್ಚಿಸಿತ್ತು. ಈವರೆಗೆ ತಮ್ಮ ಬಿಗ್ ಪ್ರಾಜೆಕ್ಟ್ ಕುರಿತು ಹೆಚ್ಚೇನೂ ಮಾಹಿತಿ ಬಿಟ್ಟುಕೊಡದ ತಂಡ ಇಂದು ಸಖತ್ ಇಂಟ್ರೆಸ್ಟಿಂಗ್ ಆಗಿರುವ ಟೀಸರ್ ರಿಲೀಸ್ ಮಾಡಿದೆ. ಗ್ಯಾಂಗ್‍ಸ್ಟರ್ ಲುಕ್‍ನಲ್ಲಿ ಯಶ್ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದು, ವೈಲ್ಡ್ ರೊಮ್ಯಾನ್ಸ್ ಮಾಡಿದ್ದಾರೆ. ಈ ಮೊದಲೇ ತಿಳಿಸಿದಂತೆ ಯಶ್ ಅವರ ಈ ವಿಶೇಷ ದಿನದಂದು ಗ್ಲಿಂಪ್ಸ್ ಅನಾವರಣಗೊಳಿಸಲಾಗಿದೆ. ಫೈನಲಿ ಸಿನಿ ಜಗತ್ತು ನಿರೀಕ್ಷಿಸಿದ ಅಪ್ಡೇಟ್‍ನ ಒಂದು ನೋಟ ಅಭಿಮಾನಿಗಳಿಗೆ ಲಭ್ಯವಾಗಿದೆ. ಕೊಟ್ಟ ಭರವಸೆಯಂತೆ, ನಾಯಕ ನಟ ಸೇರಿ ಕೆವಿಎನ್ ಪ್ರೊಡಕ್ಷನ್ಸ್ನ ಸೋಷಿಯಲ್ ಮೀಡಿಯಾಗಳಲ್ಲಿ  ಟಾಕ್ಸಿಕ್ ಗ್ಲಿಂಪ್ಸ್ ಶೇರ್ ಆಗಿದೆ.