ಗ್ರಾಹಕರ ಜೇಬಿಗೆ ಕತ್ತರಿ: ಅಮೂಲ್, ಮದರ್ ಡೈರಿ ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಏರಿಕೆ…

72
firstsuddi

ನವದೆಹಲಿ : ದೇಶಾದ್ಯಂತ ಮಾರಾಟವಾಗುವ ಅಮೂಲ್ , ಮದರ್ ಡೈರಿ ಹಾಲಿನ ದರದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಳವಾಗಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ಎರಡು ರೂ. ಏರಿಸಿದ್ದ ಅಮೂಲ್ ಹಾಗೂ ಮದರ್ ಡೈರಿ ಇದೀಗ ಮತ್ತೊಮ್ಮೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.

ಹೊಸ ದರದ ಪ್ರಕಾರ ಅಮೂಲ್ ಗೋಲ್ಡ್ ಅರ್ಧ ಲೀಟರ್ ಗೆ 31 ರೂ, ಅಮೂಲ್ ತಾಜಾ ಅರ್ಧ ಲೀಟರ್ ಗೆ 25 ರೂ, ಹಾಗೂ ಅಮೂಲ್ ಶಕ್ತಿ ಅರ್ಧ ಲೀಟರ್ ಗೆ 28 ರೂಪಾಯಿ ಆಗಲಿದೆ. ಮದರ್ ಡೈರಿ ಕೂಡ ಹಾಲಿನ ಉತ್ಪನ್ನಗಳಲ್ಲಿ ಏರಿಕೆ ಮಾಡಿದೆ. ಸದ್ಯ ಟೋನ್ಡ್ ಹಾಲು ಪ್ರತಿ ಲೀಟರ್ ಗೆ 51 ರೂ. ಇದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್ ಗೆ 45 ರೂ ಆಗಲಿದೆ.