ಬಜರಂಗದಳ ಮೂಡಿಗೆರೆ ಪ್ರಖಂಡ ಸಂಚಾಲಕನಾಗಿ ಅಜಿತ್ ಜೇನುಬೈಲ್ ನೇಮಕ…

191
firstsuddi

ಮೂಡಿಗೆರೆ : ಬಜರಂಗದಳ ಮೂಡಿಗೆರೆ ಪ್ರಖಂಡದ ಸಂಚಾಲಕನಾಗಿ ಅಜಿತ್ ಜೇನುಬೈಲ್ ಆಯ್ಕೆಯಾಗಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಇಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಸಂಯೋಜಕ ಮುರುಳಿ ಕೃಷ್ಣ ಅವರ ಸಮ್ಮುಖದಲ್ಲಿ ಪಟ್ಟಣದ ಪ್ರೀತಮ್ ಕಲ್ಯಾಣ ಮಂಟಪದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಬಜರಂಗದಳ ಸಹ ಸಂಚಾಲಕನಾಗಿ ಸಂತೋಷ್ ಶುಭನಗರ ಹಾಗೂ ಬಣಕಲ್ ಅಭಿ ಅವರನ್ನು ನೇಮಿಸಲಾಯಿತು. ಕಸಬಾ ಹೋಬಳಿ ಸಂಚಾಲಕನಾಗಿ ಸಂತೋಷ್ ದುಂಡುಗ, ಸಹ ಸಂಚಾಲಕನಾಗಿ ಶಶಿ ಕಿತ್ತಲೆಗಂಡಿ, ಗೋಣಿಬೀಡು ಹೋಬಳಿ ಸಂಚಾಲಕನಾಗಿ ಪವನ್, ಸಹ ಸಂಚಾಲಕನಾಗಿ ಅಭಿ, ನಗರ ಗೋ ರಕ್ಷಾ ಪ್ರಮುಖ್ ಆಗಿ ಪ್ರೇಮ್, ತಾಲೂಕು ಸುರಕ್ಷಾ ಪ್ರಮುಖ್ ಆಗಿ ತಾರೇಶ್ ಜೇನುಬೈಲ್, ಮೂಡಿಗೆರೆ ಪಟ್ಟಣ ಸಂಚಾಲಕರಾಗಿ ಪ್ರಣಿತ್, ತಾಲೂಕು ವಿದ್ಯಾರ್ಥಿ ಪ್ರಮುಖ್ ಆಗಿ ಸುಜಿತ್, ತಾಲೂಕು ಗೋ ರಕ್ಷಾ ಪ್ರಮುಖ್ ಆಗಿ ದೀಕ್ಷಿತ್ ಕೊಟ್ಟಿಗೆಹಾರ, ಸಹ ಗೋ ರಕ್ಷಾ ಪ್ರಮುಖ್ ಆಗಿ ಮನೋಜ್ ಅವರನ್ನು ನೇಮಿಸಲಾಯಿತು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗಿರಾಜ್ ಅರಸ್, ತಾಲೂಕು ಅಧ್ಯಕ್ಷ ಸಾಲುಮರ ಮಹೇಶ್, ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು ಸೇರಿದಂತೆ ಇತರ ಕಾರ್ಯಕರ್ತರು ಭಾಗಿಯಾದರು.