ರಾಮನಗರ: ಚನ್ನಪಟ್ಟಣದಲ್ಲಿ ಹಾವು ಏಣಿ ಆಟ ಆರಂಭವಾಗಿದೆ. 6 ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದ ನಿಖಿಲ್ ಕುಮಾರಸ್ವಾಮಿ 9ನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‍ನ ಸಿಪಿ ಯೋಗೇಶ್ವರ್ ಅವರಿಗೆ 18000 ಮತಗಳ ಮುನ್ನಡೆ ಸಿಕ್ಕಿದೆ. ನಗರದ ಪ್ರದೇಶದ ಎಣಿಕಾ ಕಾರ್ಯದಲ್ಲಿ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮತಗಳು ಜಾಸ್ತಿ ಇರುವ ಕಾರಣ ಕಾಂಗ್ರೆಸ್‍ಗೆ ಬಿದ್ದಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಚನ್ನಪಟ್ಟಣದಲ್ಲಿ ಒಟ್ಟು 20 ಸುತ್ತುಗಳಿವೆ. ಚನ್ನಪಟ್ಟಣದಲ್ಲಿ ಯಾರೇ ಗೆದ್ದರೂ 3-5 ಸಾವಿರ ಅಂತರಗಳಿಂದ ಗೆಲವು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಉಳಿದ 11 ಸುತ್ತುಗಳಲ್ಲಿ ಯಾರಿಗೆ ಮುನ್ನಡೆ ಸಿಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.