ಚಾರ್ಟರ್ಡ್ ವಿಮಾನ ಪತನ – ಪೈಲಟ್‍ಗಾಗಿ ಹುಡುಕಾಟ…

46
firstsuddi

ಜೈಪುರ : ಇಂದು ಬೆಳಗ್ಗೆ ರಾಜಸ್ಥಾನದ ಭರತ್ ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಪತನಗೊಂಡಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಜಿಲ್ಲಾಧಿಕಾರಿ, ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಮಾನ ಪತನಗೊಂಡ ಬಳಿಕ ವಿಮಾನದಲ್ಲಿದ್ದ ಪೈಲಟ್ ಕೂಡ ಸಿಕ್ಕಿಲ್ಲ. ಪೈಲಟ್ ಗಾಗಿ ಹುಡುಕಾಟ ಆರಂಭವಾಗಿದ್ದು, ವಿಮಾನದಲ್ಲಿ ಯಾರಿದ್ದರು, ಯಾವ ವಿಮಾನ ಎಂಬ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗಿಲ್ಲ.

ಬಗ್ಗೆ ಮಾಹಿತಿ ಹಂಚಿಕೊಂಡ ಭರತ್ ಪುರದ ಶ್ಯಾಮ್‍ಸಿಂಗ್, ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಳಗೆ ಬಿದ್ದಿದೆ. ಗಾಳಿಯ ತೀವ್ರತೆಗೆ ಇಡೀ ವಿಮಾನ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಇದು ಯಾವ ವಿಮಾನ. ಭಾರತೀಯ ವಾಯುಪಡೆಗೆ ಸೇರಿದ್ದೋ ಎಂಬುದರ ಕುರಿತಾಗಿ ವಾಯುಪಡೆ ಘಟಕದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದು, ಪೈಲಟ್ ಪತ್ತೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.