ಚಿಕ್ಕಮಗಳೂರಿನ ಆದಿಶಕ್ತಿ ನಗರದ ಶ್ರೀ ಶಾರದಾ ಮಠದಲ್ಲಿ ಮಾ.1 ರಂದು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ 190ನೇ ಜನ್ಮದಿನಾಚರಣೆ.

75

ಚಿಕ್ಕಮಗಳೂರು: ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ 190ನೇ ಜನ್ಮದಿನಾಚರಣೆ ಇಲ್ಲಿನ ಆದಿಶಕ್ತಿ ನಗರದ ಶ್ರೀ ಶಾರದಾ ಮಠದಲ್ಲಿ ಮಾರ್ಚ್ 1 ರಂದು ನಡೆಯಲಿದೆ. ಜನ್ಮದಿನದ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಮಂಗಳಾರತಿ, ಉಷಾ ಕೀರ್ತನೆ, ವಿಶೇಷ ಪೂಜೆ, ಭಜನೆ, ವಿಷ್ಣು ಸಹಸ್ರನಾಮ ಪಾರಾಯಣ, 11 ಗಂಟೆಗೆ ಹೋಮ ಜರುಗಲಿದೆ.
11:30ಕ್ಕೆ ವಚನವೇದ ಪಠಣ, ಶ್ರೀ ರಾಮಕೃಷ್ಣ ಪರಮಹಂಸರ ಬದುಕು ಮತ್ತು ಸಂದೇಶಗಳ ಕುರಿತು ಪ್ರವಚನ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ಆರತಿ. ಭಜನೆ ಜರುಗಲಿದೆ ಎಂದು ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ತಿಳಿಸಿದ್ದಾರೆ.