ಚಿಕ್ಕಮಗಳೂರು : ಇಂದು ಉಸ್ತುವಾರಿ ಸಚಿವರ ಪ್ರವಾಸ…

303
firstsuddi

ಚಿಕ್ಕಮಗಳೂರು : ಬೃಹತ್ ಮತ್ತು ಮಧ್ಯ ಕೈಗಾರಿಕೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರು ಜೂನ್ 21 ರಿಂದ 24ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಇಂದು ಸಂಜೆ 5ಗಂಟೆಗೆ ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. 24ರಂದು ಬೆಳಿಗ್ಗೆ 10:30ಕ್ಕೆ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸುವರು. ನಂತರ ಸಂಜೆ 5:30ಕ್ಕೆ ಗರ್ಗೆಖಾನ್ ಎಸ್ಟೇಟ್ ಗಾಳಿಗುಡ್ಡೆ ಶಿರವಾಸೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.