ಚಿಕ್ಕಮಗಳೂರು : ದಾದಿಯರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ರಾಜ್ಯಸರ್ಕಾರ ಒದಗಿಸಬೇಕು : ಮಹಮದ್ ನಯಾಜ್.

134
firstsuddi

ಚಿಕ್ಕಮಗಳೂರು : ಕೊರೊನಾ ಮುಂಚೂಣಿ ವಾರಿಯರ್ ಗಳಾಗಿ ದುಡಿಯುತ್ತಿರುವ ದಾದಿಯರಿಗೆ ವೈಯಕ್ತಿಕ ಸುರಕ್ಷತೆಗಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ರಾಜ್ಯಸರ್ಕಾರ ಒದಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್ ನಯಾಜ್ ಒತ್ತಾಯಿಸಿದರು.

ನಗರದ ಮುನಿಸಿಪಲ್ ಆಸ್ಪತ್ರೆಯಲ್ಲಿ ಅಲ್ಪಸಂಖ್ಯಾತ ಘಟಕದಿಂದ ಇಂದು ದಾದಿಯರು ಮತ್ತು ಸಿಬ್ಬಂದಿಗಳಿಗೆ ಪಡಿತರ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟ ಕಾಲದಲ್ಲಿ ಮುಂಚೂಣಿ ವಾರಿಯರ್ ಗಳಾಗಿ ಹಗಲಿರುಳೆನ್ನದೇ ದುಡಿಯು ತ್ತಿರುವ ದಾದಿಯರಿಂದಾಗಿ ಎಷ್ಟೋ ಜನರ ಪ್ರಾಣ ಉಳಿದಿದೆ. ತಮ್ಮ ಕುಟುಂಬದಿಂದ ದೂರ ಉಳಿದು ತಮ್ಮ ಜೀವವನ್ನೂ ಲೆಕ್ಕಿಸದೇ ಕೊರೊನಾ ಮಹಾಮಾರಿಯಿಂದ ಜನತೆಯನ್ನು ರಕ್ಷಿಸಲು ದಾದಿಯರು ಹೆಣಗುತ್ತಿದ್ದಾರೆ ಎಂದರು.

ಅಪತ್ಕಾಲದಲ್ಲಿ ಜನರ ಪ್ರಾಣ ರಕ್ಷಣೆಗೆ ದುಡಿಯುತ್ತಿರುವ ದಾದಿಯರಿಗೆ ಸರ್ಕಾರ ಸಕಾಲದಲ್ಲಿ ಸಂಬಳ ನೀಡಬೇಕು. ಅವರ ರಕ್ಷಣೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ದೇ ವೇಳೆ ಆಸ್ಪತ್ರೆಯ ದಾದಿಯರು ಸೇರಿದಂತೆ 30 ಸಿಬ್ಬಂದಿಗಳಿಗೆ ಹಾಗೂ 100 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಪಡಿತರ ಕಿಟ್‍ ಗಳನ್ನು ವಿತರಿಸಲಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ದಿವ್ಯ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರಾದ ಶಿಯಾನ್, ಅಬ್ದುಲ್ ರೆಹಮಾನ್, ರಾಹಿಲ್ ಪಾಷ, ಅಕ್ರಮ್, ಷರೀಫ್, ಜಾವೀದ್, ಅಪ್ಪು, ಮೋಸಿನ್ ಷರೀಫ್ ಹಾಜರಿದ್ದರು.