ಚಿಕ್ಕಮಗಳೂರು : ಧರ್ಮೇಗೌಡರ ಮಗಳ ಮದುವೆಯಲ್ಲಿ ದಿಗ್ಗಜರ ದಂಡು …

770

ಚಿಕ್ಕಮಗಳೂರು : ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ. ಒಂದು ವೇಳೆ ಇದ್ರು ಅದೂ ರಾಜಕಾರಣಕ್ಕಷ್ಟೇ ಮೀಸಲು ಅನ್ನೋದು ಜಗಜ್ಜಾಹಿರು. ವಿಧಾನಸಭೆ ಪಡಸಾಲೆಯಲ್ಲಿ ನಾನಾ-ನಾನಾ ಅನ್ನೋರು, ಹೊರಗಡೆ ಸ್ನೇಹಿತರು ಅನ್ನೋದು ಕೂಡ ಗುಟ್ಟಾಗೇನು ಉಳಿದಿಲ್ಲ. ಯಾಕಂದ್ರೆ, ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡರ ಮಗಳ ಮದುವೆಯಲ್ಲಿ ರಾಜಕೀಯ ದಿಗ್ಗಜರ ಸಮಾಗಮವಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ದಂಪತಿ ಸಮೇತರಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇನ್ನೋರ್ವ ಮಾಜಿ ಸಿಎಂ ಸಿದ್ದರಾಮಯ್ಯ ಮದುವೆಗೆ ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ. ಬಿಜೆಪಿ ಶಾಸಕ ಹಾಗೂ ಸಚಿವ ಮಾಧುಸ್ವಾಮಿ ಕೂಡ ಮದುವೆಗೆ ಬಂದು ಧರ್ಮೇಗೌಡ ಪುತ್ರಿ ಸಲೋನಿ ಹಾಗೂ ಅಳಿಯ ಮನೋಜ್ ಬೆಸ್ಟ್ ವಿಷಸ್ ಹೇಳಿದ್ದಾರೆ. ಇನ್ನು  ವೈ.ಎಸ್.ವಿ.ದತ್ತ ಸೇರಿದಂತೆ ಹಲವು ರಾಜಕೀಯ ನಾಯಕರು ನವಜೀವನಕ್ಕೆ ಕಾಲಿಡ್ತಿರೋ ದಂಪತಿಗೆ ಆಶೀರ್ವದಿಸಿದ್ರು. ಚಿಕ್ಕಮಗಳೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯುತ್ತಿರೋ ವಿವಾಹಕ್ಕೆ ಎಲ್ಲಾ ನಾಯಕರು ಆರತಕ್ಷತೆಯಲ್ಲಿ ಭಾಗವಹಿಸಿ ಧರ್ಮೇಗೌಡರ ಸಂತಸದಲ್ಲಿ ಪಾಲ್ಗೊಂಡರು. ಮುಹೂರ್ತಕ್ಕೆ ಮತ್ತಷ್ಟು ಜನನಾಯಕರು ಆಗಮಿಸಿ ಸಲೋನಿ ಹಾಗೂ  ಮನೋಜ್ ಗೆ ಪ್ರೀತಿಯ ಶುಭಕಾಮನೆಗಳನ್ನ ಹೇಳಲಿದ್ದಾರೆ.