ಮೂಡಿಗೆರೆ : ನಿನ್ನೆ ಸುರಿದ ಭಾರಿ ಮಳೆಗೆ ಬೈಕ್ ಸಂಚಾರಿಸುವಾಗಲೆ ಸೇತುವೆ ಕುಸಿದು ಬಿದ್ದಿರುವ ಘಟನೆ ತಾಲ್ಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ನಡೆದಿದೆ. ಹಿರೇಬೈಲು-ಕೂವೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಸೇತುವೆ ಮೇಲೆ ಬೈಕ್‍ನಲ್ಲಿ ಹೋಗುತ್ತಿದ್ದ ಪ್ರದೀಪ್ ಎಂಬುವವರು ನೀರಿನ ರಭಸಕ್ಕೆ ಸ್ವಲ್ಪ ದೂರ ಕೊಚ್ಚಿ ಹೋಗಿದ್ದು, ಈ ವೇಳೆ ಪ್ರದೀಪ್ ಅವರಿಗೆ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.










