ಶೃಂಗೇರಿ : ಯಾಗದ ಪೂರ್ಣಾಹುತಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ನನ್ನ ಅಧಿಕಾರ ಅವಧಿಯಲ್ಲಿ ಈ ರೀತಿಯ ಪ್ರಕರಣಗಳು ನಡೆದಿರಲಿಲ್ಲ. 14 ತಿಂಗಳ ಅಧಿಕಾರದ ವೇಳೆ ಈ ರೀತಿ ಬೆಳವಣಿಗೆಗಳು ಆಗಿರಲಿಲ್ಲ. ಅದು ಕೂಡಾ ಮಂಗಳೂರಿನಲ್ಲೇ ಏಕೆ ಈ ರೀತಿ ಪ್ರಕರಣಗಳು ನಡೆಯುತ್ತಿವೆ ಎಂದರು. ಇವತ್ತು ಎಲ್ಲಾದರು ಬಾಂಬ್ ಹಾಕಿಸಿದ್ರಾ..? ಮಂಗಳೂರು ಕಮಿಷನರ್ ಹರ್ಷ ಬಾಂಬ್ ಹಾಕಿಸಿದ್ರಾ..? ಎಂದು ಮಾಧ್ಯಮದವರ ಮುಂದೆ ಹಾಸ್ಯಮಾಡಿದ ಇವರು, ಬಾಂಬ್ ಪತ್ತೆ ಪ್ರಕರಣದಲ್ಲಿ ಸರ್ಕಾರದ ಸಾಂಚಿತ್ಯ..? ಮತ್ತೆ ಸರ್ಕಾರದ ಮೇಲೆ ಅನುಮಾನ ವ್ಯಕ್ತಪಡಿಸಿದ ಇವರು, ನಿನ್ನೆ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಪೋಟಿಸಿದಾಗ ಅಣುಕು ಪ್ರದರ್ಶನವನ್ನು ನೋಡಿದ ಹಾಗೆ ಆಗಿದೆ. ಜನರನ್ನು ಭಯಭೀತರಾಗಿ ಮಾಡಬೇಡಿ. ಕರಾವಳಿ ಪ್ರದೇಶದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಬೇಡಿ. ಸರ್ಕಾರ ಹಾಗೂ ಅಧಿಕಾರಿಗಳು ಜನರ ಬದುಕಿನಲ್ಲಿ ಹುಡುಗಾಟ ಆಡಬಾರದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯೋ ಆರ್.ಎಸ್.ಎಸ್. ಸರ್ಕಾರ ಇದೆಯೋ ಅನ್ನೋ ಅನುಮಾನ ಜನರಲ್ಲಿ ಮೂಡಿದೆ. ಅಧಿಕಾರಿಗಳು ಯಾರಾ ಮುಲಾಜಿಗೂ ಒಳಗಾಗದೆ ಕೆಲಸ ಮಾಡಬೇಕು ಎಂದರು.









