ಚಿಕ್ಕಮಗಳೂರು : ಮಗಳು ಸ್ನಾನ ಮಾಡುತ್ತಿರುವ ವೀಡಿಯೋ ಮಾಡಿ ತಂದೆಯಿಂದಲೇ ಲೈಂಗಿಕ ಕಿರುಕುಳ-ಮಗಳು ಆತ್ಮಹತ್ಯೆಗೆ ಶರಣು…

619
firstsuddi

ಚಿಕ್ಕಮಗಳೂರು : ಮಗಳು ಸ್ನಾನ ಮಾಡುತ್ತಿರುವ ವೀಡಿಯೋ ಮಾಡಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ತಂದೆಯ ವರ್ತನೆಗೆ ಬೇಸತ್ತು 18 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯ ತಂದೆ ತಾಯಿ ಕೌಟುಂಭಿಕ ಜಗಳದಿಂದ ಬೇರೆ ಬೇರೆ ವಾಸಿಸುತ್ತಿದ್ದು, ಯುವತಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ 40 ವರ್ಷದ ಪಾಪಿ ತಂದೆ ಮಗಳು ಸ್ನಾನ ಮಾಡುತ್ತಿರುವ ಫೋಟೋ ಹಾಗೂ ವೀಡಿಯೋ ಮಾಡಿ ಲೈಂಗಿಕ ಕಿರುಕುಳ ನೀಡಿದ್ದು, ತಂದೆಯ ಈ ವರ್ತನೆಯಿಂದ ಬೇಸತ್ತ ಯುವತಿ ಮೇ. 20ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಯುವತಿಯನ್ನು ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದು, ಪಾಪಿ ತಂದೆಯ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.