ಚಿಕ್ಕಮಗಳೂರು : ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ ಮಿಥುನ್ ಶರಣಾಗತಿ…

2475
firstsuddi

ಚಿಕ್ಕಮಗಳೂರು : ಪ್ರೇಯಸಿಗೆ ಚಾಕು ಇರಿದು ಪರಾರಿಯಾಗಿದ್ದ ಭಗ್ನ ಪ್ರೇಮಿ ಮಿಥುನ್ ಇಂದು ನೇರವಾಗಿ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಬಿಂಧು ಎಂಬಾಕೆಗೆ ಖಾಂಡ್ಯ ಹೋಬಳಿಯ ಮಾಲಗೋಡುವಿನ ಭದ್ರಾನದಿ ತೀರದಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಪರಸ್ಪರ ಜಗಳವಾಗಿ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಮನಬಂದತೆ ಇರಿದು ನಿನ್ನೆಯಿಂದ ನಾಪತ್ತೆಯಾಗಿದ್ದ ಭಗ್ನ ಪ್ರೇಮಿ ಇಂದು ನೇರವಾಗಿ ಎನ್.ಆರ್. ಪುರ ಕೋರ್ಟ್ ಮುಂದೆ ಶರಣಾಗಿದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.