ಚಿಕ್ಕಮಗಳೂರು : ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಯವರ ಪರಮಾಧಿಕಾರ : ಸಚಿವ ಸಿ.ಟಿ. ರವಿ.

323

ಚಿಕ್ಕಮಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ. ರವಿ ಅವರು, ಸಚಿವ ಸಂಪುಟ ವಿಸ್ತರಣೆ, ಅಧಿಕಾರ ಹಂಚಿಕೆ ಮಾಡುವುದು ಮುಖ್ಯಮಂತ್ರಿಯವರ ಪರಮಾಧಿಕಾರ ಹಾಗೂ ಯಾರಿಗೆ ಯಾವಾ ಖಾತೆ ನೀಡಬೇಕು ಎಂಬುವುದು ಅವರಿಗಿರುವ ಪರಮಾಧಿಕಾರ. ನಮ್ಮ ಮುಖ್ಯಮಂತ್ರಿಗಳು ಅನುಭವಿ ಹಾಗೂ ಜ್ಞಾನಿಗಳಾಗಿದ್ದಾರೆ. ಯಾರಿಗೆ ಯಾವಾ ಖಾತೆ, ರಾಜ್ಯದ ಅಭಿವೃದ್ದಿಗೆ ಹೇಗೆ ದುಡಿಸಿಕೊಳ್ಳಬೇಕು ಎಂಬುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಚೆನ್ನಾಗಿ ಗೊತ್ತಿದೆ. ನನ್ನ ಯಾವಾ ಖಾತೆ ತೆಗೆದರೂ ನನಗೆ ಬೇಸರವಿಲ್ಲ. ಯಾವಾ ಖಾತೆ ತೆಗೆಯಬೇಕೆಂಬುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಯಾರ ಬಳಿ ಎಷ್ಟು ಸಾಮರ್ಥ್ಯವಿದೆ ಎಂಬುವುದು ಅವರಿಗೆ ಗೊತ್ತಿದೆ. ಯಾರನ್ನಾ ಹೇಗೆ ದುಡಿಸಿಕೊಂಡರೆ ಪಕ್ಷ ಹಾಗೂ ರಾಜ್ಯಕ್ಕೆ ಲಾಭ ಎಂಬ ಅರಿವು ಅವರಿಗಿದೆ ಎಂದರು.