ಚಿಕ್ಕಮಗಳೂರು : ಸರ್ಕಾರಿ ಬಸ್‍ನ ಹಿಂಬದಿ ಟೈರಿಗೆ ಸಿಕ್ಕಿ ಬೈಕ್ ಸವಾರ ಸಾವು…

423
firstsuddi

ಚಿಕ್ಕಮಗಳೂರು : ಸರ್ಕಾರಿ ಬಸ್‍ನ ಹಿಂಬದಿ ಟೈರಿಗೆ ಸಿಕ್ಕಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ. ಕರಿಸಿದ್ದನಹಳ್ಳಿ ನಿವಾಸಿ ಸೋಮಶೇಖರ್(26) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಸರ್ಕಾರಿ ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಬಸ್‍ನ ಹಿಂಬದಿ ಟೈರಿಗೆ ಸಿಕ್ಕ ಪರಿಣಾಮ ಬಸ್ ಬೈಕ್ ಸವಾರನ ತಲೆ ಮೇಲೆ ಹರಿದಿದ್ದು, ಹೆಲ್ಮೆಟ್ ಸಮೇತ ಸವಾರನ ತಲೆ ಅಪ್ಪಚ್ಚಿಯಾಗಿದ್ದು, ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.