ಚೀನಾದ ವುಹಾನ್ ಲ್ಯಾಬ್‌ನಿಂದಲೇ ಕೊರೊನಾ ವೈರಸ್ ಸೋರಿಕೆ : ವಿಜ್ಞಾನಿಯ ಸ್ಫೋಟಕ ಹೇಳಿಕೆ…

54
firstsuddi

ನ್ಯೂಯಾರ್ಕ್ : ಕೊರೊನಾ ವೈರಸ್ ಪ್ರಕೃತಿ ನಿರ್ಮಿತವಲ್ಲ, ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಲ್ಯಾಬ್ ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿ ಆಂಡ್ರ್ಯೂ ಹಫ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ವುಹಾನ್ ಲ್ಯಾಬ್ ನಲ್ಲಿ ಚೀನಾ ನಡೆಸುತ್ತಿದ್ದ ವೈರಸ್ ಸಂಶೋಧನೆಗೆ ಅಮೆರಿಕ ಧನ ಸಹಾಯ ನೀಡಿತ್ತು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ವೇಗವಾಗಿ ಹರಡಿದ್ದನ್ನು ಗಮನಿಸಿ ಚೀನಾವೇ ಈ ವೈರಸ್ ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲದೇ ಈ ಸಂಶೋಧನೆಗೆ ಅಮೆರಿಕವೇ ಧನ ಸಹಾಯ ಮಾಡಿತ್ತು ಎಂದು ಈ ಹಿಂದೇಯೇ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಎಲ್ಲ ವರದಿ, ಆರೋಪಗಳನ್ನು ಚೀನಾ ತಿರಸ್ಕರಿಸಿತ್ತು. ಆದರೆ ಆಂಡ್ರ್ಯೂ ಹಫ್ ಅವರ ದಿ ಟ್ರೂತ್ ಎಬೌಟ್ ವುಹಾನ್ ಪುಸ್ತಕದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿದ್ದು ಸಂಚಲನ ಸೃಷ್ಟಿಸಿದೆ.

ಚೀನಾ ಲ್ಯಾಬ್ ಸರಿಯಾದ ನಿಯಂತ್ರಣ ಕ್ರಮಗಳನ್ನು ಹೊಂದಿರಲಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ವೈರಸ್ ಸೋರಿಕೆಯಾಯಿತು. ಇದು ದೇಶಿಯವಾಗಿ ರೂಪುಗೊಂಡ ರೋಗದ ತಳಿ ಎನ್ನುವುದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು ಎಂದು ಬರೆದಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ವುಹಾನ್ ಸಂಸ್ಥೆಯು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ನಿಂದ(NIH) ಧನಸಹಾಯದೊಂದಿಗೆ ಬಾವಲಿಗಳಲ್ಲಿನ ಹಲವಾರು ಕೊರೊನಾ ವೈರಸ್ ಗಳನ್ನು ಅಧ್ಯಯನ ಮಾಡುತ್ತಿದೆ. ಎನ್ ಐಹೆಚ್ ವುಹಾನ್ ಲ್ಯಾಬ್ ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯ ಜವಾಬ್ದಾರಿ ಹೊಂದಿರುವ ಈ ಎನ್ ಐಎಚ್ ಅಮೆರಿಕ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.