ಚೆನ್ನೈ : ಥರ್ಮಲ್ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಪೋಟಗೊಂಡು 6 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಚೆನ್ನೈನಿಂದ 180 ಕಿ.ಮೀ ದೂರವಿರುವ ಕಡಲೂರಿನಲ್ಲಿರುವ ಎನ್‍ಎಲ್‍ಸಿ ಇಂಡಿಯಾ ಲಿಮಿಟೆಡ್‍ನ ಪವರ್ ಪ್ಲಾಂಟ್‍ನಲ್ಲಿ ಏಕಾಏಕಿ ಬಾಯ್ಲರ್ ಸ್ಪೋಟಗೊಂಡಿದ್ದು, ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 10 ಮಂದಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.










