ಮೂಡಿಗೆರೆ:ಕಣ್ಣಿಗೆ ಕಾಣುವ ದೃಶ್ಯಗಳಿಗೆ ಕ್ಯಾಮರಾ ಮೂಲಕ ಚಿತ್ರ ಸೆರೆ ಹಿಡಿಯುವ ಕಲೆಗಾರ ಛಾಯಾಗ್ರಾಹಕ. ಕ್ಯಾಮರಾದ ಮೂಲಕ ದೃಶ್ಯಗಳಿಗೆ ವಿಶಿಷ್ಟ ಚೌಕಟ್ಟನ್ನು ಹಾಕಿ ಚಿತ್ರಕೊಂದು ಮೆರುಗು ನೀಡುತ್ತಾನೆ ಎಂದು ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಹೇಳಿದರು.ಮೂಡಿಗೆರೆಯಲ್ಲಿ ತಾಲ್ಲೂಕು ಛಾಯಗ್ರಾಹಕರ ಸಂಘದ ವತಿಯಿಂದ ನಡೆದ 179ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಛಾಯಾಗ್ರಾಹಣ ಛಾಯಚಿತ್ರಕಾರನಿಗೆ ತಾಳ್ಮೆ, ಸಹನೆ ಮತ್ತು ಏಕಾಗ್ರತೆಯನ್ನು ಕಲಿಸುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಛಾಯಾಗ್ರಾಹಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಯುವ ಅಗತ್ಯವಿದೆ ಎಂದರು.ಹವ್ಯಾಸಿ ಛಾಯಾಗ್ರಾಹಕ ನಂದೀಶ್ ಬಂಕೇನಹಳ್ಳಿ ಮಾತನಾಡಿ ಒಂದು ಊರಿನ ಛಾಯಾಗ್ರಾಹಕರು ಆ ಭಾಗದ ಚಿತ್ರರೂಪದ ಇತಿಹಾಸಕಾರು. ಹಲವು ವರ್ಷಗಳಿಂದ ವೃತ್ತಿನಿರತ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಬಳಿ ಆ ಊರಿನ ಹಲವು ವರ್ಷಗಳ ಚಿತ್ರದಾಖಲೆಗಳಿರುತ್ತವೆ. ಸಾಮಾಜಿಕ, ಸಾಂಸ್ಕøತಿಕ ಮತ್ತು ಕೌಟುಂಬಿಕವಾಗಿ ವಿಶಿಷ್ಟ ಎನಿಸುವ ಚಿತ್ರ ಸಂಗ್ರಹ ಪ್ರತಿ ಛಾಯಾಗ್ರಾಹಕನ ಆಸ್ತಿ. ಛಾಯಾಗ್ರಾಹಣ ಕ್ಷೇತ್ರದಲ್ಲಿ ಛಾಯಾಗ್ರಾಹಕ ಎಂದಿಗೂ ಕಥಾನಾಯಕನಾಗಲೂ ಸಾಧ್ಯವಿಲ್ಲ. ಕ್ಯಾಮರಾ ಹಿಂದೆಯೆ ಇರುವುದು ಪ್ರತಿ ಛಾಯಾಗ್ರಾಹಕನ ಅನಿವಾರ್ಯತೆ ಎಂದರು.
ಸಾಹಿತಿಗಳಾದ ಪೂರ್ಣೇಶ್ ಮತ್ತಾವರ, ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಉತ್ತಮ ಚಿತ್ರದ ಹಿಂದೆ ಛಾಯಾಗ್ರಾಹಕನ ಶ್ರಮವಿರುತ್ತದೆ. ಕ್ಯಾಮರಾಕ್ಕೆ ಸಂಬಂಧಿಸಿದ ತಾಂತ್ರಿಕಾ ಜ್ಞಾನದ ಜೊತೆಗೆ ಛಾಯಾಗ್ರಾಯಕನಿಗೆ ಬೇಕಾದ ವಿಶಿಷ್ಟ ದೃಷ್ಟಿಕೋನವೂ ಅತ್ಯುತ್ತಮ ಚಿತ್ರ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಯಚಂದ್ರ ಮಾತನಾಡಿದರು. ತಾಲ್ಲೂಕು ಛಾಯಗ್ರಾಹಕರ ಸಂಘದ ಉಪಾಧ್ಯಕ್ಷ ವಾಸುದೇವ್ ಕಳಸ, ಕಾರ್ಯದರ್ಶಿ ಗೋಪಿನಾಥ್, ಕಾರ್ಯಾಧ್ಯಕ್ಷ ಮಂಜುನಾಥ್ ಬಿದ್ರಳ್ಳಿ, ಉಪಾಧ್ಯಕ್ಷ ವಿಜಿ ಆಲ್ದೂರು, ಖಜಾಂಚಿ ರಕ್ಷಿತ್, ಸಹ ಕಾರ್ಯದರ್ಶಿ ಮಹೇಶ್, ಮಾಜಿ ಅಧ್ಯಕ್ಷ ವಸಂತ್ ಪೂಜಾರಿ, ಪದಾಧಿಕಾರಿಗಳಾದ ವಸಂತ್ ಪೈ, ಸುನೀಲ್, ನಂದಾದೀಪ್, ದೀಪನ್, ಕುಮಾರ್, ದಿಲೀಪ್, ರಾಜೇಶ್ ಮುಂತಾದವರು ಇದ್ದರು.