ಜಮ್ಮು-ಕಾಶ್ಮೀರಾದಲ್ಲಿ ಶಂಕಿತ ಉಗ್ರರಿಂದ ಗ್ರೆನೇಡ್ ದಾಳಿ-7 ಮಂದಿ ನಾಗರೀಕರಿಗೆ ಗಾಯ…

178
firstsuddi

ಶ್ರೀನಗರ : ಗಡಿಯಲ್ಲಿ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 7 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಉತ್ತರ ಕಾಶ್ಮೀರಾದ ಪಟ್ಟನ್ ನ ಸಿಂಗ್‍ಪೊರಾ ಪ್ರದೇಶದಲ್ಲಿ ಶಂಕಿತ ಉಗ್ರರು ಏಕಾಏಕಿ ಗ್ರೆನೇಡ್ ದಾಳಿ ನಡೆಸಿದ್ದು, ಪರಿಣಾಮ 7 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಟ್ಟನ್ ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.