ಜಮ್ಮು-ಕಾಶ್ಮೀರ ಎನ್‍ಕೌಂಟರ್-ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ…

152
firstsuddi

ಶ್ರೀನಗರ : ಒಂದೆಡೆ ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಉಗ್ರರ ಅಟ್ಟಹಾಸ ಮುಂದುವರೆಯುತ್ತಿದೆ. ಕಳೆದ ಒಂದು ತಿಂಗಳಿನಿಂದಲೂ ಭಾರತ-ಪಾಕಿಸ್ತಾನ ಗಡಿಯ ಜಮ್ಮು ಕಾಶ್ಮೀರಾದ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ಎನ್‍ಕೌಂಟರ್ ನಡೆಯುತ್ತಲೇ ಇದ್ದು, ಇಂದು ಕೂಡಾ ಜಮ್ಮು ಕಾಶ್ಮೀರಾದ ಅವಂತಿಪೊರಾ ಜಿಲ್ಲೆಯ ಮೀಜ್ ಗ್ರಾಮ ಪಂಪೊರೆ ವಲಯದಲ್ಲಿ ಹಾಗೂ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ನಡೆದ ಎನ್‍ಕೌಂಟರ್‍ನಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.