ಜಾರ್ಖಂಡ್ ವಿಧಾನಸಭೆ ಚುನಾವಣೆ: ಜಾರ್ಖಂಡ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಮತ ಪ್ರಚಾರ.

29

ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿರುಸಿನ ಚಕಮಕಿ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಬಿಹಾರದ ಗಯಾ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಜಾರ್ಖಂಡ್ ನ ಗರ್ಹ್ವಾಗೆ ತೆರಳುವರು. ಇಲ್ಲಿ ಮತಪ್ರಚಾರದ ನಂತರ ಮಧ್ಯಾಹ್ನ 2.30ಕ್ಕೆ ಚೈಬಾಸಾಗೆ ಆಗಮಿಸಲಿದ್ದಾರೆ. ಜಾಖರ್ಂಡ್ ವಿಧಾನಸಭಾ ಚುನಾವಣೆಗೆ ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮತ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಚೈಬಾಸಾ ಮತ್ತು ಗರ್ಹ್ವಾ ಕ್ಷೇತ್ರದಲ್ಲಿ ಇಂದು ಬೃಹತ್ ಪ್ರಚಾರ ಸಭೆ ಉದ್ದೇಶಿಸಿ ಅವರು ಮತ ಪ್ರಚಾರ ಮಾಡಲಿದ್ದಾರೆ.