ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್.

24

ಬೆಂಗಳೂರು: ವಕ್ಫ್ ಪ್ರಕರಣ ಸಂಬಂಧ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ವಕ್ಫ್ ನೋಟಿಸ್ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, “ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅದು ಪ್ರತಿಭಟನೆ ಅಲ್ಲ ಎಂದು ಕಿಡಿಕಾರಿದರು. ಚನ್ನಪಟ್ಟಣ ಉಪಸಮರ ವಿಚಾರವಾಗಿ ಪ್ರತಿಕ್ರಿಯಿಸಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಾದವನು ಏನು ಕೊಡುತ್ತಾನೆ. ಯಾವ ರೀತಿ ಸಹಾಯ ಮಾಡುತ್ತಾನೆ. ಅವರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತಾನೆ. ಅದು ಬಹಳ ಮುಖ್ಯ” ಎಂದರು.ಯಾರು ಯಾರು ಏನೇನು ಮಾಡಿದ್ದಾರೆ ಎಂಬ ಪಟ್ಟಿಯನ್ನು ಈ ಚುನಾವಣೆಯ ಹಬ್ಬದಂದು ಲೆಕ್ಕಕ್ಕೆ ಬರುತ್ತದೆ. ಅದರಂತೆ ಜನ ತೀರ್ಮಾನ ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಏನು ಕೊಡುಗೆ ಕೊಟ್ಟಿದ್ದಾರೆ. ಡಿ.ಕೆ.ಸುರೇಶ್ ಏನು ಕೊಡುಗೆ ಕೊಟ್ಟಿದ್ದಾರೆ. ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಏನು ಕೊಡುಗೆ ಕೊಟ್ಟಿದ್ದಾರೆ. ಈ ಎಲ್ಲಾ ಪಟ್ಟಿ ಆಗುತ್ತಿದೆ. ಅದಕ್ಕೆ ಜನ ಮಾರ್ಕ್ಸ್ ಕೊಡ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ. ರಂಗನೂ ಇಲ್ಲ ಬಿಜೆಪಿ ನಾಯಕರ ಬಗ್ಗೆ ವ್ಯಂಗವಾಡಿದರು.