ಟಿಎಂಸಿ ಹಿರಿಯ ನಾಯಕ ಸುಬ್ರತಾ ಮುಖರ್ಜಿ ನಿಧನ…

76
firstsuddi

ಕೋಲ್ಕತ್ತಾ : ಪಶ್ಚಿಮ ಬಂಗಾಳ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ನ (ಟಿಎಂಸಿ) ಹಿರಿಯ ನಾಯಕ ಸುಬ್ರತಾ ಮುಖರ್ಜಿ(75) ಅವರು ನಿಧನರಾಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಮುಖರ್ಜಿ ಅವರು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅವರು ಇನ್ನು ಮುಂದೆ ನಮ್ಮೊಂದಿಗಿಲ್ಲ ಎನ್ನುವುದನ್ನು ನನಗೆ ನಂಬಲಾಗುತ್ತಿಲ್ಲ. ಅವರು ಅಂತಹ ಸಮರ್ಪಿತ ಪಕ್ಷದ ನಾಯಕರಾಗಿದ್ದರು. ಇದು ನನಗೆ ವೈಯಕ್ತಿಕ ನಷ್ಟ. ಎಂದು ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.