ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಅವರಿಗೂ ಇಡಿ ಸಮ್ಮನ್ಸ್ ಜಾರಿ…

258
firstsuddi

ಬೆಂಗಳೂರು : ಈಗಾಗಲೇ ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ಸಹೋದರ ಡಿ.ಕೆ. ಸುರೇಶ್ ಅವರಿಗೂ ಇಡಿ ಸಮ್ಮನ್ಸ್ ಜಾರಿ ಮಾಡಿದೆ. ಡಿ.ಕೆ. ಸುರೇಶ್ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಬಳಿ 338 ಕೋಟಿ ರೂ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು ಹಾಗೂ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುವ ವೇಳೆ ಡಿ.ಕೆ. ಸುರೇಶ್ ಅವರು ಐಶ್ವರ್ಯಾ ಅವರಿಗೆ 107 ಕೋಟಿ ರೂ ಸಾಲ ನೀಡಿರುವುದಾಗಿ ಹೇಳಲಾಗಿತ್ತು. ಅಲ್ಲದೇ ಡಿ.ಕೆ. ಸುರೇಶ್ ಅವರ ಹೆಸರಿನಲ್ಲಿ ಒಟ್ಟು 27 ಆಸ್ತಿಗಳಿದ್ದು, ಅದರಲ್ಲಿ ಕೆಲವು ಆಸ್ತಿಗಳು ತಮ್ಮ ತಂದೆ ಕೆಂಪೇಗೌಡ ಅವರಿಂದ ವರ್ಗಾವಣೆ ಮಾಡಿದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮ್ಮನ್ಸ್ ಜಾರಿ ಮಾಡಿದೆ.