ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಪತ್ರಲೇಖಾ.

79
firstsuddi

ಮುಂಬೈ : ಬಾಲಿವುಡ್ ನಟ ರಾಜ್‍ಕುಮಾರ್ ರಾವ್ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವೆಂಬರ್ 15 ರಂದು ರಾಜ್‍ಕುಮಾರ್ ರಾವ್ ಮತ್ತು ಪತ್ರಲೇಖಾ ಜೊತೆ ಚಂಡೀಗಢದಲ್ಲಿ ಸಪ್ತಪದಿ ತುಳಿದರು. ಸದ್ಯ ಮದುವೆ ಸಮಾರಂಭದ ಫೋಟೋಗಳನ್ನು ರಾಜ್ಕುಮಾರ್ ರಾವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಲವಾರು ಸೆಲಿಬ್ರೆಟಿಗಳು, ಸ್ನೇಹಿತರು ನವ ದಂಪತಿಗೆ ಶುಭ ಹಾರೈಸಿದ್ದಾರೆ.

’11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ಮೋಜಿನ ನಂತರ ಅಂತಿಮವಾಗಿ ನಾನು ಇಂದು ನನ್ನ ಎಲ್ಲವೂ ಆಗಿದ್ದವರನ್ನು ಮದುವೆಯಾಗಿದ್ದೇನೆ. ಇಂದು ಪತ್ರಲೇಖ ಪತಿ ಎಂದು ಕರೆಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಾಗಿ ನನಗೆ ಮತ್ತೊಂದು ಖುಷಿ ಇಲ್ಲ ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.