ಶ್ರೀಹರಿಕೋಟಾ : ದೇಶದ ಮೊದಲ ಖಾಸಗಿ ರಾಕೆಟ್ ಅನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್-ಎಸ್ ಹೆಸರಿನ ಖಾಸಗಿ ರಾಕೆಟ್ ಉಡಾವಣೆ ಮಾಡಲಾಗಿದೆ. ಇದು ತೆಲಂಗಾಣದ ಟೆಕ್ ಸ್ಟಾರ್ಟ್ ಅಪ್ ಸ್ಕೈರೂಟ್ ಏರೋಸ್ಪೇಸ್ ರಾಕೆಟ್.
ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯುತ್ತಿದ್ದು ಭೂಮಿಯ ಕಕ್ಷೆಗೆ ಸೇರಿಸಲಿದೆ. ಸ್ಪೇಸ್ ಕಿಡ್ಜ್ ಇಂಡಿಯಾ, ಬಜೂಮ್ಕ್ ಅರ್ಮೇನಿಯಾ ಹಾಗೂ ಎನ್-ಸ್ಪೇಸ್ ಟೆಕ್ ಇಂಡಿಯಾ ಅಭಿವೃದ್ಧಿಪಡಿಸಿದ 3 ಪೇಲೋಡ್ ಗಳನ್ನು ವಿಕ್ರಮ್-ಎಸ್ ಹೊತ್ತೊಯ್ದಿದೆ. ಈ ರಾಕೆಟ್ ಅನ್ನು 2 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ರಾಕೆಟ್ 0.375 ಮೀ. ವ್ಯಾಸ ಹಾಗೂ 545 ಕೆಜಿ ತೂಕವನ್ನು ಹೊಂದಿದೆ.
6 ಮೀಟರ್ ಎತ್ತರದ ಉಡಾವಣಾ ರಾಕೆಟ್ ವಿಕ್ರಮ್-ಎಸ್ ದೇಶದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಇಡಲಾಗಿದೆ. ಬೆಳಿಗ್ಗೆ 11.30 ಕ್ಕೆ ಈ ರಾಕೆಟ್ ಉಡಾವಣೆಯಾಗಿದೆ. ಹೈದರಾಬಾದ್ ಮೂಲದ ಸ್ಟಾರ್ಟಪ್ ಸಂಸ್ಥೆಯಾದ ಸ್ಕೈರೂಟ್ ನ ಈ ಯೋಜನೆಗೆ ‘ಪ್ರಾರಂಭ್’ ಎಂದು ಹೆಸರಿಡಲಾಗಿದೆ.










