ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 20ರಂದು ಪ್ರಕಟ…

54
firstsuddi

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 20ರಂದು ಪ್ರಕಟವಾಗಲಿದೆ.

ಫಲಿತಾಂಶದ ಬಗ್ಗೆ ಮಾಹಿತಿ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಜುಲೈ 20 ರಂದು ಇಲಾಖೆಯ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಗ್ರೇಡ್ ಬದಲಿಗೆ ಅಂಕಗಳ ಮಾದರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಫಲಿತಾಂಶ ನೋಡಲು ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಇಲಾಖೆ ವೆಬ್ ಸೈಟ್ ನಲ್ಲಿ ““Know my registration number”ಲಿಂಕ್ ನೀಡಿ ಆ ಲಿಂಕ್ ಮೂಲಕ ಪ್ರತಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪಡೆಯಬಹುದು. ಇಂದಿನಿಂದ ಈ ಲಿಂಕ್ ಓಪನ್ ಆಗಲಿದ್ದು, ವಿದ್ಯಾರ್ಥಿಗಳ ಇಮೇಲ್ ಮತ್ತು ಮೊಬೈಲ್ ಗೆ ಪಿಯುಸಿ ಬೋರ್ಡ್ ಲಿಂಕ್ ಕಳಿಸಿ ಕೊಡಲಿದೆ ಎಂದು ಮಾಹಿತಿ ನೀಡಿದೆ.