ಮಂಡ್ಯ : ಸುದ್ದಿಗಾರರೊಂದಿಗೆ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯ ಕಡೆಯವರು ಬಹಳ ಕಾಳಜಿಯನ್ನು ಇಟ್ಟುಕೊಂಡಿದ್ದಾರೆ. ಯಶ್ ಅವರು ಸುಮಲತಾ ಅಂಬರೀಶ್ ಅವರ ಹಿರಿಯ ಮಗನೋ ಕಿರಿಯ ಮಗನೋ ಗೊತ್ತಿಲ್ಲ. ನನಗೆ ವೈಯಕ್ತಿಕವಾಗಿ ಹೋಗಲು ಇಷ್ಟ ಇಲ್ಲ. ಹೆಣ್ಣು ಮಕ್ಕಳ ಮೇಲೆ ಪಾಪ ತುಂಬಾ ಗೌರವವನ್ನು ಇಟ್ಟುಕೊಂಡಿದ್ದಾರೆ. ನನ್ನ ಪ್ರಚಾರದ ವೇಳೆ ಬರುತ್ತಿರುವ ಜನಸಾಗರವನ್ನು ಕಂಡು ಪಕ್ಷೇತರ ಅಭ್ಯರ್ಥಿಗೆ ಸೋಲಿನ ಭೀತಿ ಉಂಟಾಗಿದೆ. ನನ್ನದು ಅಭಿವೃದ್ಧಿ, ಅವರದ್ದು ಆರೋಪದ ಅಜೆಂಡಾ ಎಂದು ಹೇಳಿದ್ದಾರೆ.










