ನಿರ್ದೇಶಕರು ಒಳ್ಳೆಯ ಸಂದೇಶ ಸಾರುವಂತಹ ಸಿನಿಮಾಗಳನ್ನು ಮಾಡಬೇಕು : ಸಿದ್ದರಾಮಯ್ಯ…

242
firstsuddi

ಬೆಂಗಳೂರು : ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ಇಂದು ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ “ಸಲಗ” ಚಿತ್ರದ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ್ದು, ಆನೆ ನಡೆದಿದ್ದೇ ದಾರಿ, ಆನೆಗಳು ಗುಂಪಿನಲ್ಲಿದ್ದರೆ ನಮಗೆ ಏನೂ ಮಾಡುವುದಿಲ್ಲ. ಒಂಟಿಸಲಗಕ್ಕೆ ಯಾವಾಗಲೂ ಭಯ, ಆತಂಕ ಹೆಚ್ಚಿರುತ್ತದೆ. ಹೀಗಾಗಿ ನಮ್ಮ ಮೇಲೆ ದಾಳಿ ನಡೆಸಲು ಮುಂದಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಸಂದೇಶವಿರುವಂತಹ ಸಿನಿಮಾಗಳು ಕಡಿಮೆಯಾಗಿದ್ದು, ನಿರ್ದೇಶಕರು ಒಳ್ಳೆಯ ಸಂದೇಶ ಸಾರುವಂತಹ ಸಿನಿಮಾಗಳನ್ನು ಮಾಡಬೇಕು. ಜನರ ಮೆಚ್ಚುಗೆಗೆ ಹೊಂದಾಣಿಕೆಯಾಗುವಂತಹ ಸಿನಿಮಾ ಬರಬೇಕು. ಹಾಗೂ ಸಾಮಾಜಿಕ ಮೌಲ್ಯಗಳನ್ನು ತಿಳಿಸಬೇಕು ಎಂದು ಹೇಳಿ ಸಲಗ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಆಶಿಸಿದರು.