ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಬೇಸಿಸ್ ಪಾಯಿಂಟ್ 25ರಷ್ಟು ಇಳಿಕೆ ಮಾಡಿದ್ದು, ಶೇಕಡಾ 6ರಷ್ಟಿದ್ದ ರೆಪೊ ದರವನ್ನು ಶೇ 5.75ಕ್ಕೆ ಇಳಿಕೆ ಮಾಡಿದೆ. ರೆಪೊ ದರವನ್ನು ಇಳಿಕೆ ಮಾಡಿರುವುದರಿಂದ ಗೃಹ ಸಾಲದ ಮೇಲಿನ ಬಡ್ಡಿದರ ಕಡಿಮೆಯಾಗಲಿದ್ದು, ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸುವಂತೆ ಎಲ್ಲಾ ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.










