ನೀ ನನಗೆ ಬೇಡ ಎಂದ ಪ್ರೇಯಸಿ – ಮನನೊಂದು ಯುವಕ ನೇಣಿಗೆ ಶರಣು!

82
firstsuddi

ಬೆಂಗಳೂರು : ನೀ ನನಗೆ ಬೇಡ ಎಂದು ಯುವತಿ ಹೇಳಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಮೂಲದ 31 ವರ್ಷದ ಸಿದ್ದರಾಮ ಆತ್ಮಹತ್ಯೆಗೆ ಶರಣಾದ ಪ್ರೇಮಿ. ಮೃತನು ನಗರದಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದನು.

ನಗರದ ರಾಜರಾಜೇಶ್ವರಿನಗರದ ಮಾರಪ್ಪ ಲೇಔಟ್ ನಲ್ಲಿ ಅಕ್ಕ-ಭಾವನ ಮನೆಯಲ್ಲಿ ವಾಸವಿದ್ದ ಸಿದ್ದರಾಮನಿಗೆ ಸಂಬಂಧಿಯೊಬ್ಬರ ಮಗಳ ಮೇಲೆ ಪ್ರೇಮಾಂಕುರವಾಗಿತ್ತು. ಸಂಬಂಧದಲ್ಲಿ ಅಕ್ಕನ ಮಗಳೇ ಆಗಿದ್ದರಿಂದ ಇಬ್ಬರ ಪ್ರೀತಿಗೆ ಯಾರ ವಿರೋಧವೂ ಇರಲಿಲ್ಲ. ಇಬ್ಬರ ಮದುವೆಗೆ ಮಾತುಕತೆ ಕೂಡ ನಡೀತಾ ಇತ್ತು.

ಆದರೆ, ಇಬ್ಬರ ಮಧ್ಯೆ ಅದೇನಾಯ್ತೋ ಏನೋ ಗೊತ್ತಿಲ್ಲ. ಮೂರು ತಿಂಗಳ ಹಿಂದೆ ನೀ ನನಗೆ ಬೇಡ ಎಂದು ಯುವತಿ ಹೇಳಿದಳಂತೆ. ಇದ್ದಕ್ಕಿದ್ದಂತೆ ಆತ ನಿನ್ನೆ ಮಧ್ಯಾಹ್ನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಕ್ಕನ ಮಗಳು ಶಾಲೆಯಿಂದ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.