ಕಲಬುರಗಿ : ನಗರದ ಪ್ರಗತಿ ಕಾಲೋನಿಯಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಪತಿಯೇ ಕೊಲೆ ಮಾಡಿ ನೇಣು ಹಾಕಿರುವ ಆರೋಪ ಕೇಳಿ ಬಂದಿದೆ.
ಜ್ಯೋತಿ (22) ಶವವಾಗಿ ಪತ್ತೆಯಾದ ಗೃಹಿಣಿ. ಏಳು ತಿಂಗಳ ಹಿಂದಷ್ಟೇ ಲೋಕೇಶ್ ಎಂಬ ವ್ಯಕ್ತಿಯೊಂದಿಗೆ ಜ್ಯೋತಿ ವಿವಾಹವಾಗಿತ್ತು. ಕೆಕೆಆರ್ ಟಿ ಸಿ ಯ ಸೇಡಂ ಡಿಪೋ ದಲ್ಲಿ ಚಾಲಕನಾಗಿರೋ ಲೋಕೇಶ್, ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕತ್ತು ಹಿಸುಕಿ ಕೊಲೆ ಮಾಡಿ ನಂತರ ಫ್ಯಾನಿಗೆ ಶವ ನೇತು ಹಾಕಿದ್ದಾರೆ. ಹಣಕ್ಕಾಗಿ ಲೋಕೆಶ್ ಪ್ರತಿದಿನ ಜ್ಯೋತಿಗೆ ಪೀಡಿಸುತ್ತಿದ್ದ. ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ವರದಕ್ಷಿಣೆ ನೀಡಿದ್ದೇವು. ಆದರೂ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಜ್ಯೋತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪತಿ ಲೋಕೇಶ್ ಮತ್ತು ಅವರ ಕುಟುಂಬದ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










