ಪಂಚರಾಜ್ಯ ಚುನಾವಣಾ ಫಲಿತಾಂಶ – ಯಾವ ರಾಜ್ಯದಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ..?

55
firstsuddi

ಹೈದರಾಬಾದ್ : ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆಗೆ ಮತದಾನವಾಗಿದ್ದು, ಎಲ್ಲ ರಾಜ್ಯಗಳ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.

ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಮತದಾನವಾಗಿದೆ. ಪ್ರಮುಖವಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಯೋಗಿ ಆದಿತ್ಯನಾಥ್(ಗೋರಖ್ಪುರ್) ಅಖಿಲೇಶ್ ಯಾದವ್(ಕರೂಲ್ ಬಾದ್), ಕೇಶವ್ ಪ್ರಸಾದ್ ಮೌರ್ಯ, ಸ್ವಾಮಿ ಪ್ರಸಾದ್ ಮೌರ್ಯ, ವಿನಯ್ ಶಂಕರ್ ತಿವಾರಿ, ಅನಿಲ್ ರಾಜ್ಬರ್, ಅಬ್ದುಲ್ ಆಜಂ ಖಾನ್, ಚಂದ್ರಶೇಖರ್ ಆಜಾದ್ ಕಣದಲ್ಲಿದ್ದಾರೆ.

ಪಂಜಾಬ್ : 117 ಸ್ಥಾನಗಳ ಪಂಜಾಬ್ ವಿಧಾನಸಭೆ ಕೂಡ ತೀವ್ರ ಕುತೂಹಲ ಮೂಡಿಸಿದೆ. ಇಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (ಚಮ್ಕೂರ್ ಸಾಹಿಬ್ ಕ್ಷೇತ್ರ), ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (ಅಮೃತಸರ ಪೂರ್ವ ಕ್ಷೇತ್ರ), ಮತ್ತು ಮಾಜಿ ಮುಖ್ಯಮಂತ್ರಿ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ (ಪಟಿಯಾಲ ಕ್ಷೇತ್ರ) ) ನಿಂತಿದ್ದಾರೆ. ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಧುರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಗೋವಾ : 40 ಸ್ಥಾನಗಳ ಗೋವಾ ವಿಧಾನಸಭೆ ಕೂಡ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ ಹಾಗೂ ಆಮ್ ಆದ್ಮಿ ಪಕ್ಷ ಪ್ರಮುಖ ಪಕ್ಷಗಳ ನಡುವೆ ಸ್ಪರ್ಧೆ ಇದೆ. ಪ್ರಮೋದ್ ಸಾವಂತ್ ಸೇರಿದಂತೆ ಅನೇಕರು ಕಣದಲ್ಲಿದ್ದಾರೆ.

ಉತ್ತರಾಖಂಡ : 70 ಸ್ಥಾನಗಳ ಉತ್ತರಾಖಂಡ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನವಾಗಿದೆ. ಇಲ್ಲಿ ಸಿಎಂ ತಿರತ್ ಸಿಂಗ್ ರಾವತ್, ಮಾಜಿ ಸಿಎಂ ಪುಷ್ಕರ್ ಸಿಂಗ್ ಧಾಮಿ, ತ್ರಿವೇಂದ್ರ ಸಿಂಗ್, ಸೇರಿದಂತೆ ಕಾಂಗ್ರೆಸ್ ನ ಪ್ರಮುಖರು ಕಣದಲ್ಲಿದ್ದಾರೆ.

ಮಣಿಪುರ : ಈಶಾನ್ಯದ 60 ಸ್ಥಾನಗಳ ಮಣಿಪುರಕ್ಕೆ ಎರಡು ಹಂತಗಳಲ್ಲಿ ವೊಟಿಂಗ್ ಆಗಿದೆ. ಇಲ್ಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಎನ್ ಬಿರೇನ್ ಸಿಂಗ್, ಅಸೆಂಬ್ಲಿ ಸ್ಪೀಕರ್ ವೈ ಖೇಮಚಂದ್ ಸಿಂಗ್, ಉಪಮುಖ್ಯಮಂತ್ರಿ ಮತ್ತು ಎನ್ಪಿಪಿ ಅಭ್ಯರ್ಥಿ ಯುಮ್ನಮ್ ಜಾಯ್ಕುಮಾರ್ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.