ಪತ್ನಿ ಪಕ್ಕದ ಮನೆಯವನೊಂದಿಗೆ ಎಸ್ಕೇಪ್ – ಮನನೊಂದ ಪತಿ ನೇಣಿಗೆ ಶರಣು…

70
firstsuddi

ವಿಜಯನಗರ : ಪ್ರೀತಿಸಿ ಮದುವೆಯಾದವಳು ನೆರೆ ಮನೆಯವನ ಜೊತೆ ಎಸ್ಕೇಪ್ ಆಗಿದ್ದಕ್ಕೆ ಮನನೊಂದ ಪತಿ ನೇಣಿಗೆ ಶರಣಾಗಿರುವ ಘಟನೆ ತಾಳಿಕೋಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ ದ್ವಾರನಹಳ್ಳಿ(25) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಎರಡು ವರ್ಷಗಳ ಹಿಂದೆ ವೆಂಕಟೇಶ್ ಪ್ರೀತಿಸಿ ಮದುವೆಯಾಗಿದ್ದ. ಆದರೆ ಈತನ ಪಕ್ಕದ ಮನೆಯ ಸಹೋದರ ಸಂಬಂಧಿ ಶ್ರೀಶೈಲ್ ಎಂಬವನ ಜೊತೆ ಪತ್ನಿ ಓಡಿ ಹೋಗಿದ್ದಾಳೆ. ಈ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಗೆ ವೆಂಕಟೇಶ್ ದೂರು ಕೂಡ ನೀಡಿದ್ದ. ಆದರೆ ವೆಂಕಟೇಶ್ ಜೊತೆಗೆ ಇರೊಲ್ಲ, ಪ್ರಿಯಕರ ಶ್ರೀಶೈಲ್ ಜೊತೆಗೆ ಇರುವುದಾಗಿ ಪತ್ನಿ ಹೇಳಿದ್ದಳು. ಇದರಿಂದ ಮನನೊಂದು ವೆಂಕಟೇಶ್ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ‘ನನ್ನ ಸಾವಿಗೆ ಶ್ರೀಶೈಲ್ ಕಾರಣ’ ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ವಿಡಿಯೋ ನೋಡಿದ ಸ್ಥಳೀಯರು, ಜಮೀನಿನಲ್ಲಿ ನೇಣಿಗೆ ಶರಣಾಗಿ ಒದ್ದಾಡುತ್ತಿದ್ದ ಅವನ ಪ್ರಾಣ ಉಳಿಸಲು ಯತ್ನಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.