ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿ ಸ್ಥಾಪನೆ – ನೆಟ್ಟಿಗರಿಂದ ಮೆಚ್ಚುಗೆ…

31
firstsuddi

ಹೈದರಾಬಾದ್ : ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿಯನ್ನು ಹೈದರಾಬಾದಿನ ಎಸಾಮಿಯಾ ಬಜಾರ್‌ನಲ್ಲಿ ಸ್ಥಾಪಿಸಲಾಗಿದೆ. ವಿಗ್ರಹ ಸುಮಾರು 45 ಅಡಿ ಎತ್ತರವಿದ್ದು, ಹುಲ್ಲು, ಮಣ್ಣು, ಕೆಂಪು ಮರಳು ಮತ್ತು ಪೇಯಿಂಟ್ ನಿಂದ ವಿನ್ಯಾಸಗೊಳಿಸಲಾಗಿದೆ. ಈ ವಿಗ್ರಹವು 9 ಮುಖ ಹಾಗೂ 9 ಜೋಡಿ ಕೈಗಳನ್ನು ಹೊಂದಿದೆ.

ಈ ಬಗ್ಗೆ ಪರಿಸರ ಸ್ನೇಹಿ ದುರ್ಗಾದೇವಿಯ ವಿಗ್ರಹ ಸ್ಥಾಪನೆ ಆಯೋಜಕರಾದ ಗುಲಾಬ್ ಶ್ರಿನಿವಾಸ್ ಗಂಗಾಪುತ್ರ ಅವರು ಮಾಹಿತಿ ಹಂಚಿಕೊಂಡಿದ್ದು, 22 ಮಂದಿ ಕೆಲಸಗಾರರು ಒಟ್ಟು 35 ದಿನಗಳಿಂದ ಕೆಲಸ ಮಾಡಿದ್ದಾರೆ. ವಿಗ್ರಹವನ್ನು ಹುಲ್ಲು, ಮಣ್ಣು, ಕೆಂಪು ಮರಳು ಮತ್ತು ವಾಟರ್ ಪೇಂಟ್ ಬಳಸಿ ಸ್ಥಾಪಿಸಲಾಗಿದೆ ಎಂದಿದ್ದಾರೆ.

ಸದ್ಯ ಪರಿಸರ ಸ್ನೇಹಿ ದುರ್ಗಾ ದೇವಿಯ ವಿಗ್ರಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.