ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಸುಟ್ಟ ನಾಲ್ವರು ಆರೋಪಿಗಳು ಅರೆಸ್ಟ್..!

361
firstsuddi

ಹೈದರಾಬಾದ್ : ಪಶುವೈದ್ಯೆಯ ಮೇಲೆ ಒಟ್ಟು ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ, ಸುಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಪ್ರಿಯಾಂಕ ರೆಡ್ಡಿ ಅವರು ಬುಧವಾರ ಬೆಳಿಗ್ಗೆ ತಮ್ಮ ಮನೆಯಿಂದ ತಾನು ಕರ್ತವ್ಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದರು. ಬಳಿಕ ರಾತ್ರಿ ತನ್ನ ಸ್ಕೂಟಿ ಪಂಕ್ಚರ್ ಆಗಿದ್ದರಿಂದ ತನ್ನ ಸಹೋದರಿಗೆ ಕರೆ ಮಾಡಿದ್ದರು. ಈ ವೇಳೆ ಸಹೋದರಿ ಹತ್ತಿರದ ಟೋಲ್ಗೇಟ್ ಬಳಿ ಹೋಗಿ ಕಾಯುವಂತೆ ಹೇಳಿದ್ದಾರೆ. ಬಳಿಕ ಅವರು ಅಲ್ಲಿಗೆ ತೆರಳಿದಾಗ ಲಾರಿ ಚಾಲಕ ಮಹ್ಮದ್ ಪಾಷಾ, ಆತನ ಸಹಾಯಕ ಹಾಗು ಇನ್ನೂ ಇಬ್ಬರು ಪಂಕ್ಚರ್ ಹಾಕುವ ನೆಪದಲ್ಲಿ ವೈದ್ಯೆಯನ್ನು ಅಪಹರಿಸಿ ಟೋಲ್ ಗೇಟ್ ಹಿಂಬದಿ ಇದ್ದ ಖಾಲಿ ಜಾಗದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಳಿಕ ಮೃತದೇಹವನ್ನು ಘಟನಾ ಸ್ಥಳದಿಂದ 25 ಕಿ.ಮೀ ದೂರ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.