ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಪಾಕಿಸ್ತಾನ ಕಾರಣ ಎಂದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಪಾಕಿಸ್ತಾನದಲ್ಲಿ ನಾವು ಕೈಗಾರಿಕೆಗಳನ್ನು ನಿಷೇಧಿಸಬೇಕಾ? ಎಂದು ಯುಪಿ ಸರ್ಕಾರವನ್ನು ಸುಪ್ರೀಂ ಪ್ರಶ್ನಿಸಿದೆ.
ಯುಪಿ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿ, ಯುಪಿಯಲ್ಲಿನ ಕೈಗಾರಿಕೆಗಳು ರಾಷ್ಟ್ರ ರಾಜಧಾನಿಯ ಮಾಲಿನ್ಯದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಕೈಗಾರಿಕೆಗಳಿಗೆ ಕೇವಲ 8 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡುವ ನಿರ್ಧಾರವು ಕಬ್ಬು ಮತ್ತು ಹಾಲಿನ ಡೈರಿ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತದೆ. ಪಾಕಿಸ್ತಾನದ ಕಲುಷಿತ ಗಾಳಿಯು ದೆಹಲಿಯ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರತಿಪಾದಿಸಿದ್ದರು.
ಈ ವೇಳೆ ವಕೀಲರ ವಿರುದ್ಧ ಗರಂ ಆದ ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠ, ಪಾಕಿಸ್ತಾನದಲ್ಲಿ ನಾವು ಕೈಗಾರಿಕೆಗಳನ್ನು ನಿಷೇಧಿಸಬೇಕೆಂದು ನೀವು ಬಯಸುತ್ತೀರಾ? ಎಂದು ಪ್ರಶ್ನಿಸಿತು.