ಪಿಎಸ್ಐ ಹಗರಣ – ಮತ್ತೆ ಎಂಟು ಅಭ್ಯರ್ಥಿಗಳ ಬಂಧನ…

58
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಎಂಟು ಅಭ್ಯರ್ಥಿಗಳ ಬಂಧನವಾಗಿದೆ.

ಅಫಜಲಪುರ ತಾಲೂಕಿನ ರವಿರಾಜ್ ಅಖಂಡೆ, ಸಿದ್ದಣಗೌಡ ಪಾಟೀಲ್, ಕಲ್ಲಪ್ಪ ಅಲ್ಲಾಪುರ, ಜೇವರ್ಗಿ ತಾಲೂಕಿನ ಶ್ರೀಶೈಲ್, ಪೀರಪ್ಪಾ ಸಿದ್ನಾಳ, ಸೋಮನಾಥ, ವಿಜಯಕುಮಾರ್ ನೆಲೋಗಿ ಹಾಗು ಭಗವಂತರಾಯ ಯಾತನೂರ್ ಬಂಧಿತ ಅಭ್ಯರ್ಥಿಗಳು. ಇವರೆಲ್ಲಾ ನಗರದ ಎಸ್ ಬಿಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್ ಐ ಪರೀಕ್ಷೆ ಬರೆದವರು. ಈ 8 ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 8 ಅಭ್ಯರ್ಥಿಗಳ ಹೆಸರು ಇತ್ತು.

ಈ ಎಲ್ಲಾ ಎಂಟು ಜನ ಅಭ್ಯರ್ಥಿಗಳು ಆರ್ ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡವರು ಎನ್ನುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್.ಡಿ.ಪಾಟೀಲ್, ಈ ಎಲ್ಲಾ ಅಭ್ಯರ್ಥಿಗಳ ಜೊತೆ ಹಣಕಾಸಿನ ಡೀಲ್ ಮಾಡಿಕೊಂಡಿದ್ದಲ್ಲದೇ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ಸಪ್ಲೈ ಮಾಡಿದ್ದ. ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಇದೀಗ 8 ಜನ ಅಭ್ಯರ್ಥಿಗಳ ಬಂಧನದ ಮೂಲಕ ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 52ಕ್ಕೆ ಏರಿಕೆಯಾದಂತಾಗಿದೆ.